ಬಿಗ್ ಬಾಸ್ ಸುದೀಪ್ ಮತ್ತು ಹೆಚ್ಚಿದ ನಿರೀಕ್ಷೆಗಳು

ಇನ್ನೇನು ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ ಸೀಸನ್ ಏಳರ ಉದ್ಘಾಟನಾ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಅದರೊಂದಿಗೆ ಮನೆಯೊಳಗೆ ಸೇರಿಕೊಳ್ಳಲಿರುವ 17 ಮಂದಿ ಅಭ್ಯರ್ಥಿಗಳು ಯಾರು ಎನ್ನುವುದು ವೇದಿಕೆ ಮೇಲೆ ಅನಾವರಣಗೊಳ್ಳಲಿದೆ.
ವಿಶೇಷ ಏನೆಂದರೆ ಈ ಬಾರಿ ಬಿಗ್ ಬಾಸ್ ರಿಯಾಲಿಟಿ ಶೋನ ಲಾಂಚಿಂಗ್ ಕಾರ್ಯಕ್ರಮವು ರಾಜ್ಯದ ನಾಲ್ಕು ನಗರಗಳ ಏಳು ಪರದೆಗಳಲ್ಲಿ ಪ್ರಸಾರವಾಗಲಿದೆ. ಮಲ್ಲೇಶ್ವರದ ಮಂತ್ರಿ ಸ್ಕ್ವೇರ್, ಜೆ.ಪಿ ನಗರದ ಸೆಂಟ್ರಲ್, ಜಯನಗರದ ಸ್ವಾಗತ್ ಗರುಡ, ಮೈಸೂರಿನ ಮಾಲ್ ಆಫ್ ಮೈಸೂರು, ಬೆಳಗಾವಿಯ ಹೆಡ್ ಪೋಸ್ಟ್ ಆಫೀಸ್ ರಸ್ತೆಯಲ್ಲಿರುವ ಮಾಲ್, ಉಡುಪಿ ಮಣಿಪಾಲದ ಸೆಂಟ್ರಲ್ ಸಿನಿಮಾಸ್ ಮೊದಲಾದೆಡೆಗಳ ಐನಾಕ್ಸ್ ಮಲ್ಟಿಪ್ಲೆಕ್ಸ್ನಲ್ಲಿ ಪ್ರಸಾರವಾಗಲಿದೆ. ಇಲ್ಲಿಗೆ ಪ್ರವೇಶ ಉಚಿತವಾಗಿದ್ದರೂ ಇದಕ್ಕೆ ಬಿಗ್ ಬಾಸ್ ಪೋರ್ಟಲ್ ನಲ್ಲಿ ಈಗಾಗಲೇ ಟಿಕೆಟ್ ಬುಕ್ ಮಾಡಿರಬೇಕಾಗುತ್ತದೆ.
ಅಂದಹಾಗೆ ಪ್ರತಿಬಾರಿಯಂತೆ ಈ ಬಾರಿ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಅವರೇ ಅದಕ್ಕೆ ಸೂಕ್ತ ವ್ಯಕ್ತಿ ಎನ್ನುವುದಕ್ಕೆ ವಯಾಕಾಮ್ 18 ಕನ್ನಡ ಎಂಟರ್ಟೇನ್ಮೆಂಟ್ ಕ್ಲಸ್ಟರ್ ನ ಬಿಸ್ನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರು ಏಳು ಕಾರಣಗಳನ್ನು ನೀಡುತ್ತಾರೆ. .
ಆ 7ಕಾರಣಗಳು ಹೀಗಿವೆ.
1. ಸುದೀಪ್ ಅವರು ಸೂಕ್ಷ್ಮ ಸಂವೇದನೆ ಹೊಂದಿದವರು.
2. ಬುದ್ಧಿವಂತಿಕೆ ಇರುವವರು.
3. ತಕ್ಷಣದ ಪ್ರತಿಕ್ರಿಯೆ, ಸ್ಪಾಂಟಿನಿಟಿ ಇರುವವರು
4. ಚಿತ್ರರಂಗ, ಕಿರುತೆರೆ ಸೇರಿದಂತೆ ಎರಡು ದಶಕಗಳ ಅನುಭವಗಳುಳ್ಳ ವ್ಯಕ್ತಿ.
5. ಭಾಷೆ ಮತ್ತು ಅದನ್ನು ಬಳಸುವ ರೀತಿಯೇ ಆಕರ್ಷಕ.
6.ಸ್ಟಾರ್ ಕಲಾವಿದನಿಂದಾಗಿ ಶೋಗೆ ಒಂದು ಘನತೆ ಸಿಗುತ್ತದೆ.
7. ಸಮಾಜದ ಯಾವುದೇ ವಿಭಾಗದಿಂದ ಬಂದರೂ ಅವರ ಜತೆಗೆ ಮಾತನಾಡಿ ನಿಭಾಯಿಸಬಲ್ಲ ವ್ಯಕ್ತಿ ಸುದೀಪ್.
ಬಹುಶಃ ಪರಮೇಶ್ವರ ಗುಂಡ್ಕಲ್ ಅವರು ಹೇಳುವ ಈ ಮಾತುಗಳನ್ನು ಅವರ ಪ್ರತಿಯೊಬ್ಬ ಅಭಿಮಾನಿಯೂ ಒಪ್ಪುವುದರಲ್ಲಿ ಎರಡು ಮಾತಿಲ್ಲ.