top of page

ರವಿ ಬೆಳಗೆರೆ ಬಿಗ್ ಬಾಸ್ ಮನೆಗೆ ಒಂದೇ ವಾರದ ಅತಿಥಿ..!

ಬಿಗ್ ಬಾಸ್ ಮನೆಯಲ್ಲಿ ಸದ್ಯದ ಮಟ್ಟಿಗೆ ವೀಕ್ಷಕರಿಗೆ ಆಸಕ್ತಿಯ ಕೇಂದ್ರವಾಗಿರುವ ವ್ಯಕ್ತಿಗಳಲ್ಲಿ ರವಿ ಬೆಳಗೆರೆ ಪ್ರಮುಖರು. ಆದರೆ ಅನಾರೋಗ್ಯದ ಕಾರಣ ಅವರು ಮುಂದಿನವಾರದಿಂದ ಆ ಮನೆಯಲ್ಲಿ ಮುಂದುವರಿಯುವುದಿಲ್ಲ ಎನ್ನುವ ಅಧಿಕೃತ ಘೋಷಣೆಯಾಗಿದೆ.

1ನೇ ದಿನದ ಮಧ್ಯರಾತ್ರಿ 12.ಗಂಟೆ

 

ಕ್ರಶ್ ಎನ್ನುವ ವಿಚಾರದಲ್ಲಿ ಹರೀಶ್ , ಕಿಶನ್, ಚಂದನಾ , ಕುರಿ ಪ್ರತಾಪ್ ಮಾತುಕತೆ ಗಾರ್ಡನ್ ಏರಿಯಾದಲ್ಲಿ. ಆಮೇಲೆ  ಭೂಮಿ, ಶೈನ್, ವಾಸುಕಿ ಈ ಮಾತುಕತೆಯಲ್ಲಿ ಜೊತೆಗೂಡುತ್ತಾರೆ.

 

ಮಧ್ಯರಾತ್ರಿ 12.50

ರವಿ ಬೆಳಗೆರೆ ಗೌರಿ ಲಂಕೇಶ್ ಬಗ್ಗೆ ಮಾತನಾಡುತ್ತಾರೆ. ಚಾರ್ಜ್ ಶೀಟ್, ಟೈಮ್ ಬಗ್ಗೆ. ದಿನೇಶ್ ಕನ್ನಡ ಚಿತ್ರರಂಗ ಪಟಾಪಟಿ ಚಡ್ಡಿ ಹಾಕ್ಕೊಂಡು , ದೆವ್ವ ಕಾಣಿಸುತ್ತದೆ ಎಂದು ಸಿನಿಮಾ ಯುನಿಟ್ ನವರಿಗೆ ಡೌಟ್.

 

ದಿನ 2

ಮುಂಜಾನೆ 6.50

ರವಿಬೆಳಗೆರೆಗೆ ಆ್ಯಂಬುಲೆನ್ಸ್ ನ ಅವಶ್ಯಕತೆ ಇದೆ ಎಂದು ಬಿಗ್ ಬಾಸ್ ಹೇಳುತ್ತಾರೆ. ಅವರನ್ನು ಮುಖ್ಯದ್ವಾರಕ್ಕೆ ಹರೀಶ್ ರಾಜ್ ಬಿಟ್ಟು ಬಿಡುತ್ತಾರೆ.

 

ಸಮಯ 8.30

ಇದು ಬಿಗ್ ಬಾಸ್ ರೇಡಿಯೋ ಎನ್ನುವ ಮಹಿಳಾ ಅಶರೀರವಾಣಿ. ಅದರಲ್ಲಿ `ಭರಾಟೆ’ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿರುವ ಬಗ್ಗೆ ಸೂಚ್ಯವಾದ ಮಾತು.

 

ಸಮಯ 9.20

ಅಡುಗೆ ಮನೆ.

ಅಡುಗೆಗೆ ಹೆಚ್ಚಾಗಿ ಹಸಿಮೆಣಸಿನಕಾಯಿ ಬಳಸುವ ರಾಜುತಾಳಿಕೋಟೆಯನ್ನು ತರಾಟೆಗೆ ತೆಗೆದುಕೊಳ್ಳುವ ಸುಜಾತ. ಉಸಾಬರಿಯೇ ಬೇಡ ಎಂದು ಜಾಗ ಖಾಲಿ ಮಾಡುವ ರಾಜು ತಾಳಿಕೋಟೆ. ಇದೇ ವಿಚಾರದಲ್ಲಿ ಚಂದನಾ ಮತ್ತು ಜೈಜಗದೀಶ್ ಮಧ್ಯ ಪ್ರವೇಶಿಸಿ ಮಾತನಾಡುತ್ತಾರೆ.

ಬಳಿಕ ಗಾರ್ಡನ್ ಏರಿಯಾದಲ್ಲಿ ಲಾಫಿಂಗ್ ಥೆರಪಿ. ದೀಪಿಕಾ, ರಶ್ಮಿ, ಹರೀಶ್, ಚೈತ್ರಾ, ಚೈತ್ರಾ, ನಾಯಿ ಸೌಂಡ್ ಗಳ ಮಿಮಿಕ್ರಿ, ನಗು. ಕುರಿ ಪ್ರತಾಪ್ ಅವರಲ್ಲಿ ಕುರಿ ಸೌಂಡ್ ಮಾಡೋಕೆ ಹೇಳುತ್ತಾರೆ.ತಮಾಷೆ.

 

ಸಮಯ 10.05

ಕುರಿ ಪ್ರತಾಪ್ ಅವರನ್ನು ಕನ್ ಫೆಶನ್ ರೂಮ್ ಗೆ ಕರೆಸುವ ಬಿಗ್ ಬಾಸ್ ತಾವು ನೀಡಿರುವ ಒಗಟಿಗೆ ತಾವಿನ್ನೂ ಉತ್ತರ ನೀಡಿಲ್ಲ ಎಂದು ನೆನಪಿಸುತ್ತಾರೆ. `ಸುತ್ತಲೂ ಸುಣ್ಣದ ಗೋಡೆ ಎತ್ತ ನೋಡಿದರೂ ಬಾಗಿಲಿಲ್ಲ’ ಎನ್ನುವುದು ಗಾದೆಯಾಗಿರುತ್ತದೆ. ಹೊರಗಡೆ ಬಂದು ಮನೆ ಮಂದಿಯಿಂದ ಡಿಸ್ಕಶನ್ ನಡೆಯುತ್ತದೆ. ಉತ್ತರ `ಮೊಟ್ಟೆ’ ಎಂದು ಹೇಳುತ್ತಾರೆ. ಬಿಗ್ ಬಾಸ್ ಮತ್ತೆ ಕನ್ ಫೆಶನ್ ಕೋಣೆಗೆ ಕರೆಯುತ್ತಾರೆ. ಉತ್ತರ ಸರಿ ಅಂತ ಹೇಳುತ್ತಾರೆ.

2 ನೇ ಗಾದೆ : ಹಿಡಿದರೆ ಹಿಡಿಯಷ್ಟು, ಬಿಟ್ಟರೆ ಮನೆ ತುಂಬಾ. ಅದಕ್ಕೆ ದೀಪ ಎನ್ನುವುದು ಸರಿಯಾದ ಉತ್ತರ ಎಂದು ಬಿಗ್ ಬಾಸ್ ಹೇಳುತ್ತಾರೆ. ಟಾಸ್ಕ್ ಮುಗಿಯುತ್ತದೆ.

 

ಹರೀಶ್ ರಾಜ್, ವಾಸುಕಿ ವೈಭವ್ `ನಾಗಮಂಡಲ’ ಸಿನಿಮಾದ ಬಗ್ಗೆ ಚರ್ಚೆ ನಡೆಸುತ್ತಾರೆ.  ಸಂಗೀತದ ಬಗ್ಗೆ,  `ಚಿನ್ನಾರಿ ಮುತ್ತ’ ಚಿತ್ರದ ಸಾಹಿತ್ಯದ ಬಗ್ಗೆ ಮತ್ತು ನಾಗಾಭರಣ ನೀಡಿರುವ ಯಶಸ್ವಿ ಚಿತ್ರಗಳ ಬಗ್ಗೆ ಮಾತುಕತೆ ನಡೆಯುತ್ತದೆ.

 

ಸಮಯ ಮಧ್ಯಾಹ್ನ 12.05

 

ಡೈನಿಂಗ್ ಟೇಬಲ್ ನಲ್ಲಿ ಹಾಡು- ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ ಗೀತೆ ಹಾಡಿದಾಗ ಕಿಶನ್ ತಾಯಿಯನ್ನು ನೆನಪಿಸಿಕೊಂಡು ಅಳುತ್ತಾನೆ. ಆತ ತನ್ನ ತೀರಿ ಹೋಗಿರುವ ತಾಯಿಯ ಸಾವಿನ ಬಗ್ಗೆ ಮಾತನಾಡುತ್ತಾನೆ. ಮುಖ ಸುಟ್ಟು ಹೋಗಿತ್ತು. ಡಿಪ್ರೆಶನ್ ಗೆ ಒಳಗಾಗಿದ್ದರು. ತಾಯಿ ಮದ್ಯ ಸೇವನೆ ಮಾಡ್ತಾ ಇದ್ದರು. ಆರು ವರ್ಷಗಳ ಹಿಂದೆ ಜಾಂಡೀಸ್ ಬಂದು  ಅಗಲಿ ಹೋದರು ಎನ್ನುತ್ತಾನೆ.

 

ಬೆಡ್ ರೂಮಿನಲ್ಲಿ ಸ್ವಾಮೀಜಿ ಮತ್ತು ಕುರಿ ಪ್ರತಾಪ್ ಮಾತುಕತೆ ನಡೆಯುತ್ತದೆ. ಸ್ವಾಮೀಜಿಯವರು ತಮಗೆ ಭಕ್ತರು ಶೂಸ್ ಕೊಟ್ಟಿದ್ದನ್ನು ಹೇಳುತ್ತಾರೆ. ಅದನ್ನು ಹಾಕುತ್ತಾರೆ. ಗೇಮ್ ಆಡುವಾಗ ಬಳಸಲೆಂದು ತಂದಿರುವುದಾಗಿ ಹೇಳುತ್ತಾರೆ.

 

ಬಿಗ್ ಬಾಸ್ ಧ್ವನಿ

ವಾಸುಕಿ ವೈಭವ್ ಗೆ ಡ್ರೈವಿಂಗ್ ಲೈಸೆನ್ಸ್ ಬಗ್ಗೆ ವಿಚಾರಿಸುತ್ತಾರೆ. ಮನೆಯ ಒಳಗೆ ಬರಬೇಕಾದರೆ ಅವರ ಕೈಗೆ ಸುದೀಪ್ ನೀಡಿದ್ದಂಥ ಲಕೋಟೆಯನ್ನು ಓಪನ್ ಮಾಡಿ ಕ್ಯಾಮೆರಾ ಮುಂದೆ ಓದಲು ಹೇಳುತ್ತಾರೆ. ಅದರ ಒಳಗೆ ಇದ್ದ ವಾಕ್ಯ ‘ಇನ್ನು ಸ್ವಲ್ಪ ದಿನ ಹಾರಾಡ್ತಾ ಇದ್ದಿದ್ರೆ ಪೈಲೆಟೇ ಆಗ್ತಿದ್ದೆ’ ಎನ್ನುವುದಾಗಿತ್ತು. ಅದು ಯಾರಿಗೆ ಸಂಬಂಧಿಸಿದ ಮಾತು ಎನ್ನುವುದನ್ನು ಪತ್ತೆ ಹಚ್ಚುವುದು ವಾಸುಕಿಯ ಟಾಸ್ಕ್ ಆಗಿರುತ್ತದೆ.

 

ಗಾರ್ಡನ್ ಏರಿಯಾದಲ್ಲಿ ವಾಸುಕಿ ವೈಭವ್, ಚಂದನ್ ಆಚಾರ್ ಸಂಗೀತ ವೈಭವ. ಸದಾ ಮಡಿ ಬಗ್ಗೆ ಮಾತನಾಡುವ ಸ್ವಾಮೀಜಿ ತಮ್ಮೆಲ್ಲರ ಜತೆಗೆ ಬೆರೆಯುವುದಿಲ್ಲ ಎನ್ನುವುದಾಗಿ ಜೈಜಗದೀಶ್  ಮಾತನಾಡುತ್ತಾರೆ. ಅಡುಗೆ ಕೋಣೆಯಲ್ಲಿ ವಾಸುಕಿಯು  ಬಿಗ್ ಬಾಸ್ ಕೇಳಿದ ಪ್ರಶ್ನೆ ಬಗ್ಗೆ ಮಾತನಾಡುತ್ತಾ, ಬಿಗ್ ಬಾಸ್ ತಲೆಗೆ ಹುಳ ಬಿಟ್ರು ಎನ್ನುತ್ತಾರೆ. ಪ್ರಶ್ನೆಗೆ ಶೈನ್ ಶೆಟ್ಟಿಯೇ ಉತ್ತರವೇ ಎಂದು ತಿಳಿಯಲು ವಾಸುಕಿ ಪ್ರಯತ್ನಿಸುತ್ತಾರೆ. ರಾಜು ತಾಳಿಕೋಟೆ ಭುಜಕ್ಕೆ ಹೊಡೆದು ಮಾತನಾಡುವ ಬಗ್ಗೆ ದೀಪಿಕಾ ದಾಸ್ ಬೇಸರದ ಮಾತನಾಡುತ್ತಾರೆ.

 

ಗಾರ್ಡನ್ ಏರಿಯಾದಲ್ಲಿ ಕುರಿ ಪ್ರತಾಪ್ ಮತ್ತು ರಾಜು ತಾಳಿಕೋಟೆ ಊಟದ  ವಿಚಾರದಲ್ಲಿ ಒಗ್ಗಿಕೊಳ್ಳುವ ಬಗ್ಗೆ ಮಾತನಾಡುತ್ತಾರೆ. ಕನ್ ಫೆಶನ್ ರೂಮ್ ಗೆ ಕರೆಸಲ್ಪಡುವ ವಾಸುಕಿ ವೈಭವ್ ತಮಗೆ ನೀಡಲಾದ ಪ್ರಶ್ನೆಗೆ ಉತ್ತರ `ಗುರುಲಿಂಗ ಸ್ವಾಮಿ’ ಇರಬಹುದು ಎಂದು ಹೇಳುತ್ತಾರೆ.  

 

ಬಿಗ್ ಬಾಸ್ ದೀಪಿಕಾಗೆ ಕೇಳುವ ಪ್ರಶ್ನೆ; `ಕಾರು ಓಡಿಸಿದಾಗ ಎಷ್ಟು ವರ್ಷ ಪ್ರಾಯವಾಗಿತ್ತು? ಎನ್ನುವುದಾಗಿರುತ್ತದೆ. ಅದಕ್ಕೆ ಆಕೆ 15 ವರ್ಷ ಎಂದು ಉತ್ತರಿಸುತ್ತಾರೆ. ಕಾರ್ ಗೆ ಎಷ್ಟು ಗೇರ್ ಇರುತ್ತದೆ ಎಂದು ಕೂಡ ಪ್ರಶ್ನಿಸುತ್ತಾರೆ! ಬಳಿಕ ಆಕೆಗೆ ನೀಡಲಾಗಿದ್ದ ಲಕೋಟೆ ತೆರೆದು ಓದಲು ಹೇಳುತ್ತಾರೆ. ಮುಂದಿನ ಆದೇಶದ ನಂತರ ಉತ್ತರಿಸುವಂತೆ ತಿಳಿಸುತ್ತಾರೆ. ಬಳಿಕ ಚಂದನ್ ಆಚಾರ್ ಅವರಿಗೆ ಲಕೋಟೆ ಬಿಡಿಸಿ ಓದುವಂತೆ ಬಿಗ್ ಬಾಸ್ ಹೇಳುತ್ತಾರೆ. `ಹೆಣ್ಣಾಗಿ ಪಟ್ಟ ಕಷ್ಟದಿಂದ ಬೇಸತ್ತು ಹೆಣ್ಣು ಮಗಳೇ ಬೇಡ ಎಂದ ಅಮ್ಮನ ಮಗಳು’ ಎನ್ನುವ ಸೂಚನೆ ಇರುತ್ತದೆ.

 

ಚಂದನ್ ಆಚಾರ್ ಮತ್ತು ರಶ್ಮಿಯ ಮಾತುಕತೆ. ರಶ್ಮಿಯ ಊರು, ಅಮ್ಮ ಇತ್ಯಾದಿ ಮಾತುಕತೆ ನಡೆಯುತ್ತದೆ. ರವಿ ಬೆಳಗೆರೆಯ ನೆನಪಿನ ಶಕ್ತಿ ಬಗ್ಗೆ ರಶ್ಮಿ ಅಚ್ಚರಿ ವ್ಯಕ್ತಪಡಿಸುತ್ತಾರೆ. ದುನಿಯಾ ಫಿಲ್ಮ್ ಆದ ನಂತರ ನನ್ನ ಬಗ್ಗೆ ರವಿ ಬೆಳಗೆರೆ ತುಂಬ ಕೆಟ್ಟದ್ದಾಗಿ ಬರೆದಿದ್ರು, ಆವಾಗ ಅನಿಸ್ತಿತ್ತು ಯಾಕೆ ಹೀಗೆಲ್ಲ ಬರೆಯುತ್ತಾರೆ ಎಂದು. ಆದರೆ ಈಗ ಅವರು ತಿಳ್ಕೊಂಡಿರುವ ವಿಚಾರಗಳ ಬಗ್ಗೆ ನೋಡುವಾಗ ಅದೆಲ್ಲ ಏನೂ ಅಲ್ಲ ಅನಿಸುತ್ತೆ ಎಂದು ರಶ್ಮಿ ಹೇಳುತ್ತಾರೆ.

 

ಸಂಜೆ 6.05

ರವಿ ಬೆಳಗೆರೆ ಮರಳಿ ಬರುತ್ತಾರೆ. ಎಲ್ಲರೂ ಖುಷಿಯಿಂದ ವೆಲ್ಕಮ್ ಮಾಡುತ್ತಾರೆ. `ನಾನು ಹೋಗೋ ಚಾನ್ಸೇ ಇಲ್ಲ, ನಿಮ್ಮನ್ನೆಲ್ಲ ಕಳಿಸೇ ಹೋಗೋದು’ ಎನ್ನುವ ರವಿಯ ಮಾತಿಗೆ ಎಲ್ಲರೂ ನಗುತ್ತಾರೆ. `ಆರ್. ಬಿ  ವೆಲ್ ಕಮ್’ ಎಂದು ಘೋಷಣೆ ಕೂಗುತ್ತಾರೆ. ಎಲ್ಲರೂ ಒಳ್ಳೆಯ ಮಕ್ಕಳು ಎಂದು ಖುಷಿಯಿಂದ ಹೇಳುತ್ತಾರೆ ರವಿ. ನನಗೆ ಫ್ಯಾಮಿಲಿ ಮಿಸ್ ಆಗ್ತಿಲ್ಲ ಹೇಳುತ್ತಾರೆ.  ಲಿವಿಂಗ್ ಏರಿಯಾದಲ್ಲಿ ರವಿಯ ನಗೆ ಚಟಾಕಿ ಮಾತು. ಆಮೇಲೆ ಬೆಳಗ್ಗೆ ಏನು ನಡೆಯಿತು ಎಂದು ಹೇಳುತ್ತಾರೆ. ಒಬ್ಬರೇ ಎದ್ದು ಹೋಗಿ ಶುಗರ್ ಬಗ್ಗೆ, ಕುರಿ ಪ್ರತಾಪ್ ರನ್ನು ಹುಡುಕಿದೆ ಆದರೆ ಆತ ಇರಲಿಲ್ಲ ಎಂದು ಹೇಳುತ್ತಾರೆ. ಕಣ್ಣಿಗೆ ಕಟ್ಟಿ ಕರೆದುಕೊಂಡು ಹೋದರು ಎಂದು ಹೇಳುತ್ತಾರೆ. ಜೀವನದಲ್ಲಿ 2 ನೇ ಸಲ ಈ ತರಹ ಕಣ್ಣು ಕಟ್ಟಿದ್ದು ಎಂದು ಹೇಳುತ್ತಾರೆ.

 

ಹೆಣ್ಣು ಗಂಡುಗಳ ಪ್ರಕೃತಿ ಸಹಜ ವರ್ತನೆಗಳ ಬಗ್ಗೆ ರವಿ ಬೆಳಗೆರೆ, ರಶ್ಮಿ, ಚೈತ್ರಾ ಕೋಟೂರು ಮಾತುಕತೆ. ಡಾಕ್ಟರ್  ಅವರು ನೀಡಿರುವ ಸೂಚನೆಯಂತೆ ರವಿ ಬೆಳಗೆರೆ ಈ ಶನಿವಾರದವರೆಗೆ ಮಾತ್ರ ಬಿಗ್ ಬಾಸ್ ಮನೆಯಲ್ಲಿ ಅತಿಥಿಯಂತೆ  ಇರುತ್ತಾರೆ ಎಂದು ಬಿಗ್ ಬಾಸ್ ಧ್ವನಿ. ಬಳಿಕ ರಶ್ಮಿಗೂ ಲಕೋಟೆ ತೆರೆದು ಅದರಲ್ಲಿದ್ದ ಪ್ರಶ್ನೆಗೆ ಉತ್ತರ ನೀಡುವಂತೆ ಬಿಗ್ ಬಾಸ್ ಸೂಚಿಸುತ್ತದೆ. 

 

ಕ್ಯಾಪ್ಟನ್ ಸೂಚನೆ ಮೇರೆಗೆ ಕೆಂಪು ಪೆಟ್ಟಿಗೆಯೊಂದರಲ್ಲಿ ಬಣ್ಣದ ನಾಣ್ಯಗಳ ಜತೆಗೆ ಆಟವಾಡುವ ಸ್ಪರ್ಧಿಗಳು..

RAVI BELAGERE.jpg
Rate UsDon’t love itNot greatGoodGreatLove itRate Us
bottom of page